ಚಿತ್ರ: ಪಲ್ಲವಿ ಅನುಪಲ್ಲವಿ
ಸಾಹಿತ್ಯ: ಆರ್.ಎನ್. ಜಯಗೋಪಾಲ್
ಸಂಗೀತ: ಇಳಯರಾಜ

ಗಾಯನ: ಎಸ್. ಜಾನಕಿ

ನಗೂ ಎಂದಿದೆ ಮಂಜಿನಾ ಭಿಂದು
ನಗೂ ಎಂದಿದೆ ಮಂಜಿನಾ ಭಿಂದು
ನಲೀ ಎಂದಿದೆ ನಾಳೆ ಇಂದು
ನಗೂ ಎಂದಿದೆ ಮಂಜಿನಾ ಬಿಂದು

ಚಿಲಿ ಪಿಲಿ ಎಂದೂ ಹಕ್ಕಿಯು ಹೇಳಿದೆ ಈಗಾ ಬಾ ಬಾ
ಜೊತೆಯಲಿ ಕೂಡಿ ನಮ್ಮಂತೆ ಹಾರು ನಿ ಬೇಗಾ ಬಾ ಬಾ
ಹಾರಲು ಆಗದೆ ಸೋತಿರಲು
ಬಾಳಿಗೆ ಗೆಳೆಯನು ಬೇಕಿರಲು...
ಬಯಸಿದೆ ಹರಸಿದೆ ನಾ
ಕಂಡೆ ಈಗಲೆ ನಾ

ನನ್ನ ಸ್ನೇಹಿತ ನಾ

ಇದೇ ನಗುವ ಮನದ ಸ್ಪಂದಾ
ಸವೀ ಮಧುರಾ ಮಮತೆ ಬಂಧಾ

ಹಾಡುವ ಬಾ ಬಾ... ನಗೆಯಲೆ ಕೊಡುವುದು ಜಾಗಾ ಈಗಾ
ಕುಣಿಯುವ ಬಾರಾ... ಮಳೆಹನಿ ತರುವುದು ತಾಳಾ ಮೇಳಾ

ಪ್ರಕೃತಿಯು ಬರೆದ ಕವನವಿದು
ಮಮತೆಯ ಸೊಗಸಿನ ಪಲ್ಲವಿಯು
ಸುಂದರ ಸ್ನೇಹವಿದು
ಎಂತಾ ಅನುಬಂದಾ ಎಂತಾ ಆನಂದಾ

ಇದೇ ನಗುವಾ ಮನದ ಸ್ಪಂದಾ
ಸವೀ ಮಧುರಾ ಮಮತೆ ಬಂಧಾ

ಇದೇ ನಗುವಾ ಮನದಾ ಸ್ಪಂದಾ

Category: ಕನ್ನಡ ಚಿತ್ರಸಾಹಿತ್ಯ
Category: ಪಲ್ಲವಿ ಅನುಪಲ್ಲವಿ ಚಿತ್ರ
Category: ಆರ್.ಎನ್. ಜಯಗೋಪಾಲ್ ಸಾಹಿತ್ಯ
Category:Kannada